ವಿಜಯಪುರ ಸಂಸದರಿಗೆ ಅವಮಾನ : ದೇವರಮನಿ ಆಕ್ರೋಶ
ಸಿಂದಗಿ :- ಸಿಂದಗಿ ನಗರದಲ್ಲಿ ನಡೆಯುತ್ತಿರುವ ವಿಜಯಪುರ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಪ್ರೊಟೋಕಾಲ್ ಅನುಸರಿಸದೆ ವಿಜಯಪುರ ಜಿಲ್ಲೆಯ ಸಂಸದರಾದ ರಮೇಶ ಜಿಗಜಿಣಗಿ ಅವರ ಹೆಸರು ಕೈಬಿಟ್ಟು ಅವಮಾನಿಸಲಾಗಿದೆ. ಸಾಹಿತ್ಯ ಪರಿಷತ್ತು ಅನ್ನುವುದು ಸಾರ್ವಜನಿಕರ ಆಸ್ತಿ ಅದು ಯಾರೊಬ್ಬರ ಸ್ವತ್ತು ಅಲ್ಲ.
ಕಸಾಪ ಕರ್ನಾಟಕ ಸರಕಾರದ ಅಂಗಸಂಸ್ಥೆಯಾಗಿದ್ದು ರಾಜ್ಯದ ಯಾವುದೇ ಭಾಗದಲ್ಲಿ ಸಮ್ಮೇಳನ ನಡೆದರು
ಆ ಭಾಗದ ಜನಪ್ರತಿನಿದಿನಗಳಿಗೆ ಆಹ್ವಾನ ನೀಡುವುದು ಸಂಪ್ರದಾಯವಾಗಿದೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಇದನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಸಮ್ಮೇಳನ ನಡೆಸುತ್ತಿರುವುದು ವಿಷಾದಕರ ಎಂದು ಕರ್ನಾಟಕ ಆದಿಜಾಂಭವ ಜನಸಂಘ ಉತ್ತರ ಕರ್ನಾಟಕ ವಲಯ ಅಧ್ಯಕ್ಷರಾದ ಸಾಯಬಣ್ಣ ದೇವರಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಬ್ಬ ಹಿರಿಯ ಜಿಲ್ಲೆಯ ಸಂಸದರಿಗೆ ಆದ ಅವಮಾನ ಅವರೊಬ್ಬರಿಗೆ ಆದ ಅವಮಾನ ವಲ್ಲ ಇಡೀ ದಲಿತ ಸಮುದಾಯಕ್ಕೆ ಆದ ಅವಮಾನ. ಕೇವಲ ಕಾಟಾಚಾರಕ್ಕೆ ಸಂಸಧರನ್ನು ಹೊಗಳಿ ನೂರು -ಎರಡುನೂರು ಆಮಂತ್ರಣ ಪತ್ರಿಕೆ ಪ್ರಿಂಟ್ ಹಾಕಿ ವೇದಿಕೆ ಮೇಲೆ ಇಟ್ಟರೆ ಸಾಲದು ಬಹಿರಂಗವಾಗಿ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹಾಸಿಂಪಿರ ವಾಲಿಕಾರ ರವರು ವಿಜಯಪುರ ಸಂಸದರಾದ ಶ್ರೀ ರಮೇಶ ಜಿಗಜಿಣಗಿ ರವರಿಗೆ ಕ್ಷಮೆ ಕೇಳಬೇಕು. ಪತ್ಯೇಕ್ಷ ಹಾಗೂ ಪರೋಕ್ಷವಾಗಿ ಈ ಪ್ರಮಾದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ರಾಜ್ಯ ಸರಕಾರ ಶಿಸ್ತು ಕ್ರಮ ಕೈಗೊಳಬೇಕು