Friday, October 2, 2026
Home ಕರ್ನಾಟಕ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಲು ಸಿಂಧಗಿ ತಾಲ್ಲೂಕು ಗಾಣಿಗ ಸಮಾಜದಿಂದ ಆಗ್ರಹ

ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಲು ಸಿಂಧಗಿ ತಾಲ್ಲೂಕು ಗಾಣಿಗ ಸಮಾಜದಿಂದ ಆಗ್ರಹ

0 comments

ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಲು ಸಿಂಧಗಿ ತಾಲ್ಲೂಕು ಗಾಣಿಗ ಸಮಾಜದಿಂದ ಆಗ್ರಹ

  • ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಲಕ್ಷ್ಮಣ ಸವದಿ ಅವರಿಗೆ ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ತಕ್ಷಣವೇ ಸಚಿವ ಸ್ಥಾನ ನೀಡಬೇಕು ಎಂದು ಸಿಂಧಗಿ ತಾಲ್ಲೂಕು ಗಾಣಿಗ ಸಮಾಜದ ನಿರ್ದೇಶಕರು ಭಗವಂತ್ರಾಯ ಬಿರಾದಾರ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಲಕ್ಷ್ಮಣ್ ಸವದಿ ಅವರು ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಧೀಮಂತ ನಾಯಕರಾಗಿದ್ದಾರೆ. ಈ ಹಿಂದೆ ಸಚಿವರಾಗಿ ಹಾಗೂ ಉಪಮುಖ್ಯಮಂತ್ರಿಗಳಾಗಿ ಅವರು ನೀಡಿದ ಆಡಳಿತಾತ್ಮಕ ಕೊಡುಗೆ ಅಪಾರ. ಅಥಣಿ ಕ್ಷೇತ್ರದ ಜನತೆ ಅವರ ನಾಯಕತ್ವವನ್ನು ಮೆಚ್ಚಿ ಭಾರಿ ಬಹುಮತದಿಂದ ಆರಿಸಿ ಕಳುಹಿಸಿದ್ದಾರೆ. ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗದ ಅವರು, ಇಡೀ ಉತ್ತರ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಯ ಧ್ವನಿಯಾಗಿದ್ದಾರೆ” ಎಂದು ತಿಳಿಸಿದ್ದಾರೆ

ಗಾಣಿಗ ಸಮಾಜ ಸೇರಿದಂತೆ ಹಿಂದುಳಿದ ವರ್ಗಗಳ ಮತ್ತು ಇಡೀ ಉತ್ತರ ಕರ್ನಾಟಕದ ನೀರಾವರಿ, ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ವೇಗ ಸಿಗಬೇಕಾದರೆ ಸವದಿ ಅವರಂತಹ ಅನುಭವಿಗಳ ಅಗತ್ಯ ಸರ್ಕಾರಕ್ಕೆ ಇದೆ. ಜನಸಾಮಾನ್ಯರ ನೋವಿಗೆ ತಕ್ಷಣ ಸ್ಪಂದಿಸುವ ಶಕ್ತಿ ಅವರಿಗಿದೆ.

ಪಕ್ಷದ ವರಿಷ್ಠರು ಯಾವುದೇ ವಿಳಂಬ ಮಾಡದೆ ಶ್ರೀ ಲಕ್ಷ್ಮಣ್ ಸವದಿ ಅವರಿಗೆ DCM ಸ್ಥಾನದ ಜೋತೆಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಮತ್ತು ಪ್ರಮುಖ ಖಾತೆಯನ್ನು ಜವಾಬ್ದಾರಿಯಾಗಿ ನೀಡಬೇಕು ಎಂದು ಭಗವಂತ್ರಾಯ ಬಿರಾದಾರ ಅವರು ಪ್ರಕಟಣೆಯಲ್ಲಿ ತಿಳಿಸಿದರು

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign

➤ ಸಿಂದಗಿ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ   ➤ ಪತ್ರಕರ್ತ ಶಾಂತೂ ಹಿರೇಮಠಗೆ ಅವರಿಗೆ ನಬಿರೋಷನ್ ಪ್ರಕಾಶನ ರಾಜ್ಯ ಮಟ್ಟದ ಪ್ರಜಾಧ್ವನಿ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ   ➤ ಕೆ ಆರ್ ಎಸ್ ಪಕ್ಷದ ನೂತನ ಸಿಂದಗಿ ತಾಲೂಕಾಧ್ಯಕ್ಷರಾಗಿ ಶಂಕರ ಸುಂಗಠಾಣ ರವರು ಆಯ್ಕೆ   ➤ ಸಿದ್ದರಾಮಯ್ಯ ಮೂರ್ತಿ ತೆರವು ಪ್ರಕರಣ : ಸರ್ಕಾರದ ವಿರುದ್ಧ ಕುರುಬ ಸಮುದಾಯದ ಆಕ್ರೋಶ ನಾಳೆ ಪ್ರತಿಭಟನೆ   ➤ ನೂರರ ಅಣ್ಣನಿಗೆ ತೊಂಬತ್ತರ ತಂಗಿ ರಾಖಿ ಕಟ್ಟಿದ ಅಪರೂಪದ ಕ್ಷಣ