Friday, October 2, 2026
Home ಆರೋಗ್ಯ ಶಹಾಪುರ ತಾಲೂಕನಲ್ಲಿ ನಕಲಿ ವೈದ್ಯರ ವಿರುದ್ದ ಜು. 24 ರಂದು ಸಿದ್ದು ಪಟ್ಟೇದಾರ ನೇತೃತ್ವದಲ್ಲಿ ಪ್ರತಿಭಟನೆ

ಶಹಾಪುರ ತಾಲೂಕನಲ್ಲಿ ನಕಲಿ ವೈದ್ಯರ ವಿರುದ್ದ ಜು. 24 ರಂದು ಸಿದ್ದು ಪಟ್ಟೇದಾರ ನೇತೃತ್ವದಲ್ಲಿ ಪ್ರತಿಭಟನೆ

0 comments
  • ಶಹಾಪುರ: ತಾಲ್ಲೂಕಿನಲ್ಲಿ ನಕಲಿ ಡಾಕ್ಟರ್ಗಳ ಉ ದಿನೇ ದಿನೇ ಹುಟ್ಟಿಕೊಳ್ಳುತ್ತಿದ್ದು, ಕೆಪಿಎಇಎ ನೋಂದಣಿ ಇಲ್ಲದೆ, ಕಾನೂನುಬಾಹಿರ ವಾಗಿ ಚಿಕಿತ್ಸೆ ನೀಡುತ್ತಿದ್ದು, ಯಾವುದೇ ವೈದ್ಯಕೀಯ ಪದವಿ ಜ್ಞಾನ ಇಲ್ಲದಿದ್ದರೂ ಇಂಗ್ಲಿಷ್ ಮೆಡಿಸಿನ್‌ಗಳನ್ನು ರೋಗಿಗಳಿಗೆ ನೀಡುತ್ತಿದ್ದು ಈ ಬಗ್ಗೆ ನಮ್ಮ ಕರ್ನಾಟಕ ಸೇನೆ ಯ ನಿರಂತರವಾಗಿ ಸತ್ಯಶೋಧಿಸಿ ಡಿಎಚ್‌ಓ ಹಾಗೂ ಟಿಎಚ್‌ಓ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಜು. 24 ರಂದು ತಾಲೂಕ ಆರೋಗ್ಯಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕ ಅಧ್ಯಕ್ಷ ಸಿದ್ದು ಪಟ್ಟೇದಾರ ತಿಳಿಸಿದ್ದಾರೆ. ಕೆಲವೇಡೆ ಬೇರೆ ವಿದ್ಯಾರ್ಹತೆ ಹೊಂದಿದ್ದರು, ಬಿಎಎಂಎಸ್, ಬಿಎಸ್‌ಎಂಎಸ್, ಬಿಯುಎಂಎಸ್ ವಿದ್ಯಾ ರ್ಹತೆ ಹೊಂದಿ ಆಲೋಪತಿ ಇಂಗ್ಲಿಷ್ ಮೆಡಿಸಿನ್ ನೀಡುತ್ತಿದ್ದಾರೆ. ಈ ಬಗ್ಗೆ ತಾಲೂಕ ಆರೋಗ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ಅವರ ಗಮನಕ್ಕಿದೆ. ಇನ್ನೂ ಸುಮಾರು 10 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಲೋಕಲ್ ನಕಲಿ ವೈದ್ಯರ ಜೊತೆ ಶಾಮಿಲಾಗಿದ್ದಾರೆ. ವೈದ್ಯರ ಮೇಲೆ ಕಾನೂನು ಕ್ರಮ ಜರುಗಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign

➤ ಸಿಂದಗಿ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ   ➤ ಪತ್ರಕರ್ತ ಶಾಂತೂ ಹಿರೇಮಠಗೆ ಅವರಿಗೆ ನಬಿರೋಷನ್ ಪ್ರಕಾಶನ ರಾಜ್ಯ ಮಟ್ಟದ ಪ್ರಜಾಧ್ವನಿ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ   ➤ ಕೆ ಆರ್ ಎಸ್ ಪಕ್ಷದ ನೂತನ ಸಿಂದಗಿ ತಾಲೂಕಾಧ್ಯಕ್ಷರಾಗಿ ಶಂಕರ ಸುಂಗಠಾಣ ರವರು ಆಯ್ಕೆ   ➤ ಸಿದ್ದರಾಮಯ್ಯ ಮೂರ್ತಿ ತೆರವು ಪ್ರಕರಣ : ಸರ್ಕಾರದ ವಿರುದ್ಧ ಕುರುಬ ಸಮುದಾಯದ ಆಕ್ರೋಶ ನಾಳೆ ಪ್ರತಿಭಟನೆ   ➤ ನೂರರ ಅಣ್ಣನಿಗೆ ತೊಂಬತ್ತರ ತಂಗಿ ರಾಖಿ ಕಟ್ಟಿದ ಅಪರೂಪದ ಕ್ಷಣ