ರೈತರು ಬೆಳೆದ ಬೆಳೆ ನೀರಿಗಾಗಿ ಬೃಹತ್ ರೈತರ ಪಾದಯಾತ್ರೆ – ಗಬ್ಬೂರಿನಿಂದ ನಾರಾಯಣಪುರ ಡ್ಯಾಂಗೆ
ಪಾದಯಾತ್ರೆಯಲ್ಲಿ ಭಾಗವಹಿಸುವ ರೈತರಿಗಾಗಿ ವಿಶೇಷವಾಗಿ ನೀರಿನ ಬಾಟಲ್‌ಗಳನ್ನು ವಿತರಿಸಲಾಯಿತು
ರಾಜ್ಯದ ವಿವಿಧ ರೈತಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಹಾಗೂ ದಲಿತಪರ ಸಂಘಟನೆಗಳು, ಸಮಾಜ ಸೇವಕರು, ಬುದ್ಧಿಜೀವಿಗಳ ಸಂಯುಕ್ತಾಶ್ರಯದಲ್ಲಿ
ನೀರಿಗಾಗಿ ಬೃಹತ್ ರೈತರ ಪಾದಯಾತ್ರೆ
ಗಬ್ಬೂರು ಶ್ರೀ ಬೂದಿಬಸವೇಶ್ವರ ಮಹಾದ್ವಾರದಿಂದ ನಾರಾಯಣಪುರ
ಪ್ರಾರಂಭ ದಿನಾಂಕ: 15-11-2026 ರವಿವಾರ ರಂದು, ಸಮಯ: ಬೆಳಗ್ಗೆ 10-00 ಗಂಟೆಗೆ
ತಲುಪುವ ದಿನಾಂಕ: 20-11-2026 ಶುಕ್ರವಾರ ರಂದು ನಾರಾಯಣಪುರ ತಲುಪಿದರು
ಮಾರ್ಗ:ಗಬ್ಬೂರಿನಿಂದ – ದೇವದುರ್ಗ – ಜಾಲಹಳ್ಳಿ – ತಿಂಥಿಣಿ ಬ್ರಿಡ್ಜ್ – ಕಕ್ಕೇರಿ – ಕೋಡೆಕಲ್ ಮಾರ್ಗವಾಗಿ ನಾರಾಯಣಪುರ ವರೆಗೆ
ನವೆಂಬರ್ 15 ರವಿವಾರ ಬೆಳಗ್ಗೆ 10 ಗಂಟೆಗೆ ಗಬ್ಬೂರಿನ ಶ್ರೀ ಬೂದಿಬಸವೇಶ್ವರ ಮಹಾದ್ವಾರದಿಂದ ಪಾದಯಾತ್ರೆ ಪ್ರಾರಂಭಿಸಿ ನವೆಂಬರ್ 20 ಶುಕ್ರವಾರದಂದು ನಾರಾಯಣಪುರ ತಲುಪಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ವಾಲ್ಮೀಕಿ ಸರ್ಕಲ್ ನಲ್ಲಿ ಸಹಸ್ರಾರು ರೈತರು ಸೇರಿ ನೀರಿಗಾಗಿ ಪ್ರತಿಭಟನೆ ಮಾಡಿದರು
ಗಬ್ಬೂರು – ದೇವದುರ್ಗ – ಜಾಲಹಳ್ಳಿ – ತಿಂಥಿಣಿ ಬ್ರಿಡ್ಜ್ – ಕಕ್ಕೇರಿ – ಕೋಡೆಕಲ್ ಮಾರ್ಗವಾಗಿ 6 ದಿನಗಳ ಕಾಲ ರೈತರುಕಾಲ್ನಡಿಗೆ ನಡೆದು . ರಾಜ್ಯದ ವಿವಿಧ ರೈತಪರ, ಕನ್ನಡಪರ, ದಲಿತಪರ ಸಂಘಟನೆಗಳು, ಸಮಾಜ ಸೇವಕರು, ರೈತ ಮಹಿಳೆಯರು ಶುಕ್ರವಾರ ದಿನಾಂಕ 20.11.26 ರಂದು ನಾರಾಯಣಪುರ ಗ್ರಾಮಕ್ಕೆ ಆಗಮಿಸಿ ರಸ್ತೆಯಲ್ಲಿ ಪ್ರತಿಭಟನೆ ಮಾಡಿ ನಂತರ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಕರ್ನಾಟಕ ಸರ್ಕಾರ ಉಧ್ಯಮ ಮುಖ್ಯ ಇಂಜಿನಿಯರ್ರವರ ಕಚೇರಿಗೆ ಮುಂದೆ ಧರಣಿ ಕುಳಿತು ನೀರು ಕೊಡಿ ಎಂದು ಕೇಳಿದರು ನಂತರ ಡ್ಯಾಮ್ ಮುತ್ತಿಗೆ ಹಾಕಲು ಪ್ರಯತ್ನ ಮಾಡಿದರು ಆದರೆ ಪೊಲೀಸರ ಮಧ್ಯಸ್ತಿಕೆ ವಹಿಸಿ ಡ್ಯಾಮ್ ಪ್ರವೇಶ ತಡೆದರು
ವರದಿ ಮಲ್ಲಿಕಾರ್ಜುನ ಚಲವಾದಿ ಹುಣಸಗಿ