Monday, 23 November 2026 — Tv6 news Kannada
BREAKING NEWS
ವೆಬ್ ಸ್ಟೋರೀಸ್ ರೈತರು ಬೆಳೆದ ಬೆಳೆ ನೀರಿಗಾಗಿ ಬೃಹತ್ ರೈತರ ಪಾದಯಾತ್ರೆ – ಗಬ್ಬೂರಿನಿಂದ ನಾರಾಯಣಪುರ ಡ್ಯಾಂಗೆ ಕರ್ನಾಟಕ ಕರ್ನಾಟಕ ಕಡಣಿ ಗ್ರಾಮದ ಬಸವರಾಜ್ ಪಡಶೆಟ್ಟಿಗೆ ಮಾಜಿ ಮುಖ್ಯಮಂತ್ರಿ ದಿ/ ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ ಕರ್ನಾಟಕ ಇಂಡಿ ಮತಕ್ಷೇತ್ರಕ್ಕೆ ಜಿಲ್ಲಾ ಜೆಡಿಎಸ್ ವೀಕ್ಷಕರ ಭೇಟಿ ಅಂತರಾಷ್ಟ್ರೀಯ ವಿಜಯಪುರ ಜಿಲ್ಲೆಯನ್ನು 371(j) ಗೆ ಸೇರ್ಪಡೆ ಗೊಳಿಸಲು ಸಾಯಬಣ್ಣ ದೇವರಮನಿ ಆಗ್ರಹ  ಜಿಲ್ಲಾ ಸುದ್ದಿಗಳು ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು: ಚಂದ್ರಶೇಖರ ನುಗ್ಲಿ ಅಪರಾಧ ಸಿಂದಗಿ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಕರ್ನಾಟಕ ಪತ್ರಕರ್ತ ಶಾಂತೂ ಹಿರೇಮಠಗೆ ಅವರಿಗೆ ನಬಿರೋಷನ್ ಪ್ರಕಾಶನ ರಾಜ್ಯ ಮಟ್ಟದ ಪ್ರಜಾಧ್ವನಿ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ ವೆಬ್ ಸ್ಟೋರೀಸ್ ರೈತರು ಬೆಳೆದ ಬೆಳೆ ನೀರಿಗಾಗಿ ಬೃಹತ್ ರೈತರ ಪಾದಯಾತ್ರೆ – ಗಬ್ಬೂರಿನಿಂದ ನಾರಾಯಣಪುರ ಡ್ಯಾಂಗೆ ಕರ್ನಾಟಕ ಕರ್ನಾಟಕ ಕಡಣಿ ಗ್ರಾಮದ ಬಸವರಾಜ್ ಪಡಶೆಟ್ಟಿಗೆ ಮಾಜಿ ಮುಖ್ಯಮಂತ್ರಿ ದಿ/ ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ ಕರ್ನಾಟಕ ಇಂಡಿ ಮತಕ್ಷೇತ್ರಕ್ಕೆ ಜಿಲ್ಲಾ ಜೆಡಿಎಸ್ ವೀಕ್ಷಕರ ಭೇಟಿ ಅಂತರಾಷ್ಟ್ರೀಯ ವಿಜಯಪುರ ಜಿಲ್ಲೆಯನ್ನು 371(j) ಗೆ ಸೇರ್ಪಡೆ ಗೊಳಿಸಲು ಸಾಯಬಣ್ಣ ದೇವರಮನಿ ಆಗ್ರಹ  ಜಿಲ್ಲಾ ಸುದ್ದಿಗಳು ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು: ಚಂದ್ರಶೇಖರ ನುಗ್ಲಿ ಅಪರಾಧ ಸಿಂದಗಿ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಕರ್ನಾಟಕ ಪತ್ರಕರ್ತ ಶಾಂತೂ ಹಿರೇಮಠಗೆ ಅವರಿಗೆ ನಬಿರೋಷನ್ ಪ್ರಕಾಶನ ರಾಜ್ಯ ಮಟ್ಟದ ಪ್ರಜಾಧ್ವನಿ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ
ಕರ್ನಾಟಕ

ಇಂಡಿ ಮತಕ್ಷೇತ್ರಕ್ಕೆ ಜಿಲ್ಲಾ ಜೆಡಿಎಸ್ ವೀಕ್ಷಕರ ಭೇಟಿ

ಮಲ್ಲು ಬಗಲೂರ
ವರದಿ: ಮಲ್ಲು ಬಗಲೂರ ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 6 ವೀಕ್ಷಣೆಗಳು

ಇಂಡಿ: ಜಿಲ್ಲಾ ಜೆಡಿಎಸ್ ಘಟಕದ ಆದೇಶದ ಮೇರೆಗೆ ಸಿಂದಗಿ ಮತಕ್ಷೇತ್ರದ ಎಂ.ಎನ್. ಪಾಟೀಲ ಹಾಗೂ ಪ್ರಕಾಶ ಹಿರೇಕುರಬರ ಅವರು ಜಿಲ್ಲಾ ವೀಕ್ಷಕರಾಗಿ ಇಂಡಿ ಮತಕ್ಷೇತ್ರದ ಝಳಕಿ ಗ್ರಾಮಕ್ಕೆ ಭೇಟಿ ನೀಡಿ, ಕಾರ್ಯಕರ್ತರಿಂದ ಗೌರವ ಸನ್ಮಾನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ವೀಕ್ಷಕ ಎಂ.ಎನ್. ಪಾಟೀಲ ಅವರು, “ಇಂಡಿ ಮತಕ್ಷೇತ್ರವು ಜನತಾದಳದ ಗಟ್ಟಿಯಾದ ನೆಲೆಯಾಗಿದೆ. ಕಾರ್ಯಕರ್ತರು ಹಿಂದಿನ ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳದೆ, ಮುಂಬರುವ 2028ರ ಚುನಾವಣೆಗೆ ಈಗಿನಿಂದಲೇ ಸಜ್ಜಾಗಬೇಕು. ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಆದ್ದರಿಂದ ಕಾರ್ಯಕರ್ತರು ಧೃತಿಗೆಡದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಮತ್ತೋರ್ವ ಜಿಲ್ಲಾ ವೀಕ್ಷಕ ಪ್ರಕಾಶ ಹಿರೇಕುರಬರ ಮಾತನಾಡಿ, “ಇಂಡಿ ಮತಕ್ಷೇತ್ರವು ಜನತಾದಳದ ಭದ್ರ ನೆಲೆಯಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೈಗೊಂಡ ನೀರಾವರಿ ಯೋಜನೆಗಳು ಇಂಡಿ ಮತ್ತು ಸಿಂದಗಿ ಭಾಗದ ಜನರಿಗೆ ಅಪಾರ ವರದಾನವಾಗಿವೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದ ಮಹಾನಾಯಕರು. ಅವರ ಜನಪರ ಕಾರ್ಯಗಳು ಪಕ್ಷಕ್ಕೆ ದೊಡ್ಡ ಶಕ್ತಿಯಾಗಿವೆ. 2028ರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಅವರು ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. “ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ರೈತರ ಸಾಲ ಮನ್ನಾದ ಹರಿಕಾರ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ನೀರಾವರಿ ಯೋಜನೆಗಳ ಹರಿಕಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ನಮ್ಮ ಪಕ್ಷಕ್ಕಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ, ರವಿ ನಾವಿ, ಪವನ ಪಾಟೀಲ, ಲಕ್ಷ್ಮಣ ಪಾಟೀಲ, ಸುಭಾಷ ಚಟ್ಟರಕಿ, ಸಿದ್ದು ಶಿರಶಾಡ, ಆನಂದ ಬನಸೋಡೆ, ಬೀರಪ್ಪ ಸಗಯಿ, ಸುಭಾಷ ಬುಕ್ಕಿ, ಬಸನಗೌಡ ಪಾಟೀಲ, ನಿಂಬಣ್ಣ ಶಿರಶಾಡ ಸೇರಿದಂತೆ ಜೆಡಿಎಸ್ ಕಾರ್ಯಕರ್ತ ಉಪಸ್ಥಿತರಿದ್ದರು

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 33 ಲೇಖನಗಳು

ಮಲ್ಲು ಬಗಲೂರ

ಮಲ್ಲು ಬಗಲೂರ ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment