- “ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು: ಚಂದ್ರಶೇಖರ ನುಗ್ಲಿ ಕರೆ
*ಸಿಂದಗಿ:* ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು ಮತ್ತು ಶ್ರೇಷ್ಠವಾದದ್ದು. ಶಿಕ್ಷಕರು ಸಮಾಜದ ನಿಜವಾದ ಶಿಲ್ಪಿಗಳು. ಅವರು ಕೇವಲ ಅಕ್ಷರ ಜ್ಞಾನವನ್ನು ಮಾತ್ರ ನೀಡುವುದಿಲ್ಲ, ಬದಲಿಗೆ ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಾರೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ ಹೇಳಿದರು.
ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಿವೃತ್ತ ಹಿರಿಯ ಮುಖ್ಯೋಪಾಧ್ಯಾಯ ಪುಂಡಲೀಕ ಎಸ್. ಜಾಲವಾದಿ ಅವರ ಸೇವಾ ವಯೋನಿವೃತ್ತಿ ಪ್ರಯುಕ್ತ ಅವರ ಸ್ನೇಹಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ ಶಿಕ್ಷಕರು ಅಜ್ಞಾನದ ಕತ್ತಲೆಯನ್ನು ಹೊಡೆದೋಡಿಸಿ, ಜ್ಞಾನದ ಬೆಳಕನ್ನು ಮೂಡಿಸುವವರು. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಹಿರಿದಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಒಬ್ಬ ಶಿಕ್ಷಕರ ಪರಿಶ್ರಮ, ಕಾಳಜಿ ಮತ್ತು ಮಾರ್ಗದರ್ಶನ ಇರುತ್ತದೆ ಎಂದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಪುಂಡಲೀಕ ಜಾಲವಾದಿ ಅವರು ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ಕ್ರಿಯಾತ್ಮಕ ಸಂಘಟಕರಾಗಿ ಸಮಾಜ ಸೇವೆ ಮಾಡಲು ಕಂಕಣಬದ್ಧರಾಗಬೇಕು ಎಂದರು.
ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಆಲಗೂರ, ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ನಿಂಗರಾಜ ಮೂಲಿಮನಿ ಮಾತನಾಡಿ, ಶಿಕ್ಷಕ ವೃತ್ತಿ ಎಂಬುದು ಅತ್ಯಂತ ಪವಿತ್ರವಾದದ್ದು. ಪ್ರಶಸ್ತಿಗಿಂತ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದು ಶಿಕ್ಷಕರ ಕರ್ತವ್ಯವಾಗಬೇಕು ಎಂದರು.
ಗುಬ್ಬೇವಾಡದ ಕನ್ನಯ್ಯ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಶಿಕ್ಷಕರು ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಮತ್ತು ಸಮಾಜಕ್ಕೆ ಒಳ್ಳೆಯ ದಾರಿ ತೋರಿಸುವ ದೀಪದಂತವರು ಎಂದರು.
ಕಾರ್ಯಕ್ರಮದಲ್ಲಿ ಪುಂಡಲೀಕ ಜಾಲವಾದಿ, ಸಾಹಿತಿ ಎಸ್.ಎಸ್. ಸಾತಿಹಾಳ ಮಾತನಾಡಿದರು.
ವೇದಿಕೆಯಲ್ಲಿ ಶ್ರೀಮತಿ ರುಕ್ಮುಣಿ ಪುಂಡಲೀಕ ಜಾಲವಾದಿ ದಂಪತಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಆಯ್ ಎಸ್. ಟಕ್ಕೆ, ಅಕ್ಷರ ದಾಸೋಹ ಅಧಿಕಾರಿ ಅರವಿಂದ ಡೊಣ್ಣೂರ, ಕ.ರಾ.ಪ್ರಾ.ಶಾ.ಶಿ.ಸಂಘದ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ ಸೊನ್ನ, ಎಂ.ಎಸ್. ಚೌಧರಿ, ಪಿ.ಎಸ್. ತಳಕೇರಿ, ರಾಯಪ್ಪ ಇವಣಗಿ, ಆರ್.ಎಚ್. ಬಿರಾದಾರ, ಎ.ಆರ್. ಹೆಗ್ಗನದೊಡ್ಡಿ, ಸಿ ಬಿ ಗಡಗಿ . ಕೆ ಕೆ ಗುತ್ತೆದಾರ .ಬಸವರಾಜ ಪಾಟೀಲ ಸೇರಿದಂತೆ ಅಪಾರ ಶಿಕ್ಷಕರು ಬಂದು ಬಳಗದವರು ಇದ್ದರು.
ಇದೇ ಸಂದರ್ಭದಲ್ಲಿ ಆದರ್ಶ ಶಿಕ್ಷಕರಾದ ವಿರೇಶ ಪತ್ತಾರ, ಗೀತಾ ಟೀಚರ್, ಎಂ.ಎನ್. ಗೌರ ಹಾಗೂ ಮಕ್ಕಳ ಸಾಹಿತಿ ಬಸವರಾಜ ಅಗಸರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಳ್ಳಿ ವಲಯದ ಸಿಆರ್‌ಪಿ ನಿಂಗಣ್ಣ ರೂಗಿ ನಿರೂಪಿಸಿದರು. ದೇವರ ಹಿಪ್ಪರಗಿ ಪ್ರಾ ಶಾ ಶಿ ಸಂ ಪ್ರದಾನ ಕಾರ್ಯದರ್ಶಿ ಬಸವರಾಜ ನಾಗರಾಳ ಸ್ವಾಗತಿಸಿದರು. ಶಿಕ್ಷಕ ಜಗದೀಶ ಸಿಂಗೆ ಪ್ರಾರ್ಥನಾ ಗೀತೆ ಹೇಳಿದರು.ಶಿಕ್ಷಕ ಮಾಳು ಹೊಸೂರ ವಂದಿಸಿದರು.