ಓತಿಹಾಳ ತೋಟದ ಮನೆಗೆ ಬೆಂಕ್ಕಿ ಅಪಾರ ಹಾನಿ
ಸಿಂದಗಿ ತಾಲ್ಲೂಕಿನ ಓತಿಹಾಳ ಗ್ರಾಮದ ತೋಟದ ಮನೆಯೊಂದಕ್ಕೆ ಬೆಂಕಿ ತಗುಲಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಬೂದಿಹಾಳ ಪಿ ಎಚ್ ಗ್ರಾಮದವರಾದ ಚನ್ನಬಸಪ್ಪ ನೀಲಕಂಠಪ್ಪ ಬಿರಾದಾರ 2 ಎಕರೆ 30 ಗುಂಟೆ ಭೂಮಿಯಲ್ಲಿ ಪತ್ತರೆ ಮನೆಗೆ ಬೆಂಕಿ ತಗುಲಿದ್ದು, ಮನೆಯಲ್ಲಿ ದಾಸ್ತಾನು ಇರಿಸಲಾಗಿದ್ದ ಗೋಧಿ ಜೋಳ ಸೆಂಗಾ ಉಳ್ಳಗಡ್ಡಿ ಜವಿಗೋಧಿ . ಅಕ್ಕಿ ಮತ್ತು ಹತ್ತಿ ಬೀಜ ಹಾಗೂ ಮೂರು ಕುರಿಗಳು ಹಾಗೂ 75 ಸಾವಿರ ರೂಪಾಯಿ ಬೆಳ್ಳಿ ಬಂಗಾರ ಸಂಪೂರ್ಣ ಸುಟ್ಟು ಹೋಗಿವೆ .ತೋಟದಲ್ಲಿ ಮಂಗಳವಾರ ಮುಂಜಾನೆ ವೇಳೆ ಅಡುಗೆ ಮಾಡಿ ತೋಟದಲ್ಲಿ ಕೆಲಸದಲ್ಲಿ ತೋಡಿಗಿದ ವೇಳೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಕ್ಕಪಕ್ಕದ ತೋಟದವರು ಸಹಾಯದಿಂದ ಬೆಂಕಿಯನ್ನು ನಂದಿಸಲು ಸಾಧ್ಯವಾಗದ ಕಾರಣ ಅಗ್ನಿ ಶಾಮಕ ದಳದವರು ಬಂದು ಅಗ್ನಿ ನಂದಿಸಿದರು. ರೈತನ ಹೆಂಡತಿ ದೊಡ್ಡಮ್ಮ ಚನ್ನಬಸಪ್ಪ ಬಿರಾದಾರ ಪತ್ರಿಕಾ ವರದಿಗಾರ ಮುಂದೆ ತಮ್ಮ ಅಳಿಲು ತೋಡಿ ಕೊಂಡು ನಮ್ಮ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದೆ ಇಂದು ಊಟ ಮಾಡಬೇಕಾದರೆ ಮನೆಯಲ್ಲಿ ಇರುವ ಅಡುಗೆ ಪರಿಕರಗಳು ಹಾಗೂ ಬಟ್ಟೆ ಆಹಾರ ದಾನ್ಯ ಮತ್ತು ಕೃಷಿ ಉತ್ಪನ್ನಗಳು ಹಾನಿಯಾಗಿದೆ. ಅಂದಾಜು 12 ಲಕ್ಷ ನಷ್ಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖಾಯ ಗ್ರಾಮ ಆಡಳಿತ ಅಧಿಕಾರಿ ಕುಮಾರಿ ಎಸ್ ಆಯ್ ಮೋರೆ ಭೇಟಿ ನೀಡಿ ಪರಿಶೀಲಿಸಿದರು.