Tuesday, July 28, 2026
Home ಕರ್ನಾಟಕ ನೀಲಹಳ್ಳಿ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಟ ಅಧಿಕಾರಿಗಳ ವಿರುದ್ಧ ಉಮೇಶ ಕೆ ಮುದ್ನಾಳ ಆಕ್ರೋಶ

ನೀಲಹಳ್ಳಿ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಟ ಅಧಿಕಾರಿಗಳ ವಿರುದ್ಧ ಉಮೇಶ ಕೆ ಮುದ್ನಾಳ ಆಕ್ರೋಶ

0 comments
  • ಯಾದಗಿರಿ: ತಾಲೂಕಿನ ಗುರುಮಿಠಕಲ್ ಮತ್‌ಕ್ಷೇತ್ರದ ವ್ಯಾಪ್ತಿಗೆ ಬರುವ ನೀಲಹಳ್ಳಿ ಕಿಲ್ಲನಕೇರಾ ಗ್ರಾಮದಲ್ಲಿ ಶಿಥಿಲ್‌ಗೊಂಡ ನೀರಿನ ಟ್ಯಾಂಕ್ ನೆಲಸಮ ಗೊಳ್ಳಿಸಬೇಕು ವಿಶೇಷ ಮೂಲಭೂತ ಸೌರ್ಕಯ ಹೊದಗಿಸಿಕೊಡಬೇಕೆಂದು ಕೈಯಲ್ಲಿ ಕಾಲಿಕೊಡ ಹಿಡಿದು ಚಳುವಳಿ ಮಾಡಿದರು ಕಳ್ಳಾಟ ಆಡುತ್ತಿರುವ ಅಧಿಕಾರಿಗಳು ಎಚ್ಚತ್ತು ಕೊಳ್ಳದ ದಪ್ಪ ಚರ್ಮದ ಅಧಿಕಾರಿಗಳ ವಿರುದ್ದ ಯಾದಗಿರಿ – ರಾಯಚೂರು ಹೋಗುವ ಮುಖ್ಯ ರಸ್ತೆ ಕಿಲ್ಲನಕೇರಾ ಸರ್ಕಲ್‌ನಲ್ಲಿ ಜಾಲಿಮುಳ್ಳು ಬಡಿದು ಬೃಹತ್ ಪ್ರತಿಭಟನೆಯನ್ನು ಇದೇ ಜೂಲೈ – ೧೬ ರಂದು ಬೆಳಗ್ಗೆ ೯-೦೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಹೋರಾಟಕ್ಕೆ ಜಾಲಿ ಮುಳ್ಳುಗಳನ್ನು ಕಡೆಯುವ ಕಾರ್ಯ ಭರದಿಂದ ಸಾಗಿದೆ ಎಂದು ಅಖಿಲ ಭಾರತಿಯ ಕೋಲಿ ಸಮಾಜದ ರಾಜ್ಯ ಸಂಘಟನ ಕಾರ್ಯಾದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ.

ನೀಲಹಳ್ಳಿ ಕಿಲ್ಲನಕೇರಾ ಗ್ರಾಮಗಳಿಗೆ ಬೇಟಿ ನೀಡಿ ಕುಡಿಯುವನೀರಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಜೊತೆ ಚರ್ಚಸಿ ಗ್ರಾಮದೊಳಗೆ ಸಂಚಾರ ಮಾಡಿ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾಗರಿಕರು ತಮಗೆ ಮೂಲ ಸೌಕರ್ಯಕ್ಕಾಗಿ ಹೋರಾಟ ನಡೆಸಿದರು ಈ ಹಿಂದೇ ಭಾರಿ ಪ್ರತಿಭಟನೆ ಮಾಡಿದ ಹಿನ್ನಲೆಯಲ್ಲಿ ಕೆಲವು ಅಧಿಕಾರಿಗಳು ನಾಮಕವಾಸ್ತೆ ಗ್ರಾಮಕ್ಕೆ ಬೇಟಿ ನೀಡಿ ಒಂದು ವಾರದಲ್ಲಿ ಎಲ್ಲಾ ಸಮಸ್ಯಗಳನ್ನು ಬಗೆಹರಿಸುದಾಗಿ ಬರವಸೆ ನೀಡಿದರು ಆದರೆ ಇಲ್ಲಿಯವರೆಗೆ ಕೆಲವು ಸಮಸ್ಯೆಗಳನ್ನು ಬಗೆಹರಿಸದೆ ಕುಂಭ-ಕರ್ಣ ನಿದ್ರೆಯಲ್ಲಿ ಜಾರಿದ ದಪ್ಪ ಚರ್ಮದ ಅಧಿಕಾರಿಗಳ ವಿರುದ್ದ ಹೊರಾಟದ ಎಚ್ಚರಿಕೆ ನೀಡಿದರು ಎಚ್ಚೇತ್ತುಕೊಳ್ಳದ ಕಳ್ಳಾಟ ಆಡುತ್ತಿರುವ ಅಧಿಕಾರಿಗಳ ಚಳಿ ಬಿಡಿಸುವ ಕಾರಣದಿಂದಾಗಿ ಈ ಹೊರಾಟ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಸಂಬಂದಪಟ್ಟವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿಗಾಗಿ ಕೈಯಲ್ಲಿ ಕಾಲಿಕೊಡ ಹಿಡಿದು ವಿನೂತನ ಚಳುವಳಿಗೆ ಎಚ್ಚತ್ತು ಕೊಳ್ಳದ ದಪ್ಪ ಚರ್ಮದ ಅಧಿಕಾರಿಗಳ ವಿರುದ್ದ ಜಾಲಿಮುಳ್ಳಗಳ ಪ್ರದರ್ಶಿಸುವ ಮುಖಾಂತರ ಬೃಹತ ಪ್ರತಿಭಟನೆ ಸಾರ್ವಜನಿಕರ ನಿತದುಷ್ಟಿಯಿಂದ ಸಾಮಾಜಿಕ ಹೋರಾಗಾಟರ ಉಮೇಶ ಕೆ ಮುದ್ನಾಳ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ

ಕೆಲಸ ಸರಿಯಾಗಿ ಮಾಡದ ಸಂಬಂದಪಟ್ಟ ಅಧಿಕಾರಿಗಳ ದಿವ್ಯಾ ನಿರ್ಲಕ್ಷದಿಂದ ಗ್ರಾಮ ಗಬ್ಬೆದ್ದು ನಾರುತ್ತಿದೆ ಸರಿಯಾದ ನೀರು ನೈರ್ಮಲ್ಯ ನಿರ್ವಹಣೆ ಆಗುತ್ತಿಲ್ಲ, ಆದರೆ ಹಣ ಮಾತ್ರ ನೀರಿನಂತೆ ಖರ್ಚಾಗುತ್ತಿದೆ. ಆದರೆ ಕನಿಷ್ಟ ಶುದ್ದ ಕುಡಿಯುವ ನೀರಿನ ಸೌವಲಭ್ಯ ಸರಿಯಾಗಿ ಜನತೆಗೆ ಸಿಗುತ್ತಿಲ್ಲ. ದೂರವಾಣಿ ಕರೆ ಮಾಡಿದರೂ ಸ್ಪಂದಿಸುವುದಿಲ್ಲ, ಜಿಲ್ಲೆಯಾಗಿ ೧೬ ವರ್ಷವಾದರೂ ಗ್ರಾಮ ಸೌಂದರ್ಯೀಕರಣವಾಗಿಲ್ಲ ಎಂದು ಅವರು ದೂರಿದ್ದಾರೆ. ಈ ಬೇಜವಾಬ್ದಾರಿತನ ಖಂಡಿಸಿ ಮುಳ್ಳು ಬೇಲಿ ಹಚ್ಚಿ ಪ್ರತಿಭಟನೆಗೆ ನಿರ್ಧರಿಸಲಾಗಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಾದಗಿರಿ ರಾಯಚೂರು ಮುಖ್ಯ ರಸ್ತೆ ತಡೆದು ಜಿಲ್ಲಾಡಳಿತಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಬೇಕೆಂದು ಅವರು ಮನವಿ ಮಾಡಿದರು ಇದೆ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign

ಶಹಾಪುರ ತಾಲೂಕನಲ್ಲಿ ನಕಲಿ ವೈದ್ಯರ ವಿರುದ್ದ ಜು. 24 ರಂದು ಸಿದ್ದು ಪಟ್ಟೇದಾರ ನೇತೃತ್ವದಲ್ಲಿ ಪ್ರತಿಭಟನೆ   ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರಿಗೆ ಅವಮಾನ : ದೇವರಮನಿ ಆಕ್ರೋಶ   ನೀಲಹಳ್ಳಿ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಟ ಅಧಿಕಾರಿಗಳ ವಿರುದ್ಧ ಉಮೇಶ ಕೆ ಮುದ್ನಾಳ ಆಕ್ರೋಶ   ರೈತರಿಗೆ ಬೆಳೆ ವಿಮೆ - ಬೆಳೆ ನಷ್ಟದಿಂದ ಆರ್ಥಿಕ ಭದ್ರತೆ   ಮಲ್ಲಿಕಾರ್ಜುನ ಪಗಡೆ ರವರ ಮೇಲೆ ಪ್ರಕರಣ ಧಾಖಲಿಸಿರುವದು ಖಂಡನೆ : ಪತ್ರಕರ್ತ ಮಲ್ಲು ಬಗಲೂರ