Saturday, August 15, 2026
Home ಕರ್ನಾಟಕ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರ ನೇಮಕಾತಿಯಲ್ಲಿ ಒಳಮೀಸಲಾತಿ ಜಾರಿಗೆ ಆಗ್ರಹ

ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರ ನೇಮಕಾತಿಯಲ್ಲಿ ಒಳಮೀಸಲಾತಿ ಜಾರಿಗೆ ಆಗ್ರಹ

0 comments

  1. ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರ ನೇಮಕಾತಿಯಲ್ಲಿ ಒಳಮೀಸಲಾತಿ ಜಾರಿಗೆ ಆಗ್ರಹ.

ಸಿಂದಗಿ :- ಕರ್ನಾಟಕ ಸರಕಾರ ಇತ್ತೀಚಿಗೆ 2026-27ನೇ ಸಾಲಿನಲ್ಲಿ ಶೈಕ್ಷಣಿಕ ಹಿತದೃಷ್ಟಿಯಿಂದ 51000 ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಆದೇಶ ಹೊರಡಿಸಿದೆ ಇದನ್ನು ಸ್ವಾಗತಿಸುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಒಳಮೀಸಲಾತಿ ಜಾರಿಯಾಗಿದ್ದು ಅದರನ್ವಯ ಒಳಮೀಸಲಾತಿ ಅಡಿಯಲ್ಲೇ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕು… ಎಂದು ಜಿಲ್ಲಾ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ, ಹಾಗೂ ಉಪನಿರ್ದೇಶಕರು ಕಾಲೇಜ್ ಶಿಕ್ಷಣ ಇಲಾಖೆ ರವರಿಗೆ ಸರಕಾರ ಮಾರ್ಗದರ್ಶನ ನೀಡಬೇಕು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇತ್ತೀಚಿಗೆ SDA ಮತ್ತು FDA ಹುದ್ದೆಗಳ ಅದಿಸೂಚನೆ ಹೊರಡಿಸಿದ್ದು ಆ ಸಂಖ್ಯೆ ಕೇವಲ ಆರು ಹುದ್ದೆಗಳಾಗಿವೆ… ಹೀಗೆ ಕಡಿಮೆ ಹುದ್ದೆಗಳ ಸಂಖ್ಯೆಯಲ್ಲಿ ಕರೆದರೆ ಸರಕಾರಕ್ಕೆ ಲಾಭವೆ ವಿನಹ ಉದ್ಯೋಗಾಕ್ಷಿಗಳಿಗಲ್ಲ.. ಇದರಿಂದ ಸರಕಾರದ ಖಜಾನೆ ತುಂಬುತ್ತೆ ಹೊರತು. ಬಡವರ ಹೊಟ್ಟೆ ತುಂಬುವುದಿಲ್ಲ.. ಸರಕಾರದ ಈ ವ್ಯವಸ್ಥಿತ ಪಿತೂರಿ ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳಿಗೆ ಮರಣ ಶಾಸನ ಬರೆಯುತ್ತಿದೆ.. ಕಡಿಮೆ ಹುದ್ದೆ ಕರೆದರೆ ಒಳಮೀಸಲಾತಿ ಅನ್ವಯ ವಾಗುವುದಿಲ್ಲ ಅವು ಪರಿಶಿಷ್ಟ ಜಾತಿ ಇತರೆ ಎಂದು ಪರಿಗಣಿಸಲಾಗುತ್ತದೆ.. ಆದ್ದರಿಂದ ಬಲಗೈಯಲ್ಲಿ ಕೊಟ್ಟು ಎಡಗೈಯಲ್ಲಿ ಕಿತ್ತಿಕೊಳ್ಳುವ ಪ್ರಯತ್ನ ನಡೆದಿದೆ.ಈ ಕಡೆ ಒಳಮೀಸಲಾತಿ ಜಾರಿ ಮಾಡಿ ಆ ಕಡೆ ಸರಕಾರಿ ಹುದ್ದೆಗಳನ್ನು ಕೊಡಲು ಅಡ್ಡಗಾಲು ಹಾಕುತ್ತಿದೆ. ಮತ್ತೊಂದೆಡೆ ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳ ಜೊತೆ ಚಲ್ಲಾಟ ವಾಡುತ್ತಿದೆ. ಇದನ್ನು ಸರಕಾರ ಕೂಡಲೇ ಸರಿಪಡಿಸಬೇಕು.. ಇಲ್ಲ 100 ಕ್ಕಿಂತ ಕಡಿಮೆ ಹುದ್ದೆಗಳಿದ್ದರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಪರೀಕ್ಷಾ ವೆಚ್ಚ ಉಚಿತವಾಗಿ ಘೋಸಿಸಬೇಕು… ಇಲ್ಲದಿದ್ದರೆ ರಾಜ್ಯದ್ಯಂತ ಹೋರಾಟಕ್ಕೆ ಕರೆ ನೀಡಬೇಕಾಗುತ್ತೆ ಎಂದು ಕರ್ನಾಟಕ ಅದಿಜಾಂಭವ ಜನಸಂಘದ ಉತ್ತರ ಕರ್ನಾಟಕ ವಲಯ ಅಧ್ಯಕ್ಷರಾದ ಸಾಯಬಣ್ಣ ದೇವರಮನಿ ಸರಕಾರಕ್ಕೆ ಆಗ್ರಹಿಸಿದ್ದಾರೆ.

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign

ಹಾಡುಹಗಲೆ ಯಾದಗಿರಿ ಪತ್ರಕರ್ತ ಸಾಗರ ದೇಸಾಯಿ ಕಿಡ್ನಾಪ್   ಶಹಾಪುರ ತಾಲೂಕನಲ್ಲಿ ನಕಲಿ ವೈದ್ಯರ ವಿರುದ್ದ ಜು. 24 ರಂದು ಸಿದ್ದು ಪಟ್ಟೇದಾರ ನೇತೃತ್ವದಲ್ಲಿ ಪ್ರತಿಭಟನೆ   ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರಿಗೆ ಅವಮಾನ : ದೇವರಮನಿ ಆಕ್ರೋಶ   ನೀಲಹಳ್ಳಿ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಟ ಅಧಿಕಾರಿಗಳ ವಿರುದ್ಧ ಉಮೇಶ ಕೆ ಮುದ್ನಾಳ ಆಕ್ರೋಶ   ರೈತರಿಗೆ ಬೆಳೆ ವಿಮೆ - ಬೆಳೆ ನಷ್ಟದಿಂದ ಆರ್ಥಿಕ ಭದ್ರತೆ