ಯುವಾ ಬ್ರಿಗೇಡ್ ವತಿಯಿಂದ ಅಫಜಲಪುರ ತಾಲೂಕಿನ ಘತ್ತರಗಿ ಭೀಮಾನದಿ ಸ್ವಚ್ಚತಾ ಕಾರ್ಯ ಮಾಡಲಾಯಿತು
ನಾವು ನದಿಗಳನ್ನು ಕೇವಲ ಜಲಮೂಲಗಳನ್ನಾಗಿ ನೋಡಲಿಲ್ಲ, ಬದಲಾಗಿ ಜೀವ ನೀಡುವ ದೇವರು ಎಂದೇ ಭಾವಿಸುತ್ತೇವೆ ಎಂದು ಯುವಾ ಬ್ರಿಗೇಡ್ ಕಾರ್ಯಕರ್ತರು ಹೇಳಿದರು
ಕಳೆದ ಬಾರಿ ಎರಡು ವರ್ಷಗಳ ಹಿಂದೆಯೇ ಭೀಮೆಯ ಸ್ವಚ್ಚತೆ ಮಾಡಿದ್ದೆವು ಸ್ವಚ್ಚತೆ ಮಾಡಿ ಎರಡೇ ವರ್ಷದಲ್ಲಿ ಮತ್ತೆ ಅದೇ ಸ್ಥಿತಿಗೆ ಇರುದರೀಂದ

ಸುಮಾರು 40 ಕಾರ್ಯಕರ್ತರ ಶ್ರಮದಿಂದ 15 ಟ್ರಾಕ್ಟರ್ ಸುಮಾರು 30 ಟನ್ ಗೂ ಅಧಿಕದಷ್ಟು ಮಲಿನ ತ್ಯಾಜ್ಯವನ್ನು ನಮ್ಮ ಜೀವಜಲ ಭೀಮೆಯಿಂದ ಹೊರತೆಗೆದೇವು
ಅದು ಅಷ್ಟು ಸುಲಭವು ಆಗಿರಲಿಲ್ಲ 2 ವರ್ಷದಿಂದ ಕೂಡಿದ್ದ ಬಟ್ಟೆ-ಬರೆ , ದೇವರಪೊಟೋ, ಜೋತೆಗೆ ಅದರ ಪುಡಿಯಾದ ಗಾಜಿನ ಚೂರುಗಳು ಕಸ- ಕಡ್ಡಿ ಮತ್ತು ತೆಂಗಿನಕಾಯಿಗಳ ರಾಶಿಯೇ ತುಂಬಿತ್ತು ನದಿಯಲ್ಲಿ. ಒಂದಷ್ಟು ಕಾರ್ಯಕರ್ತರಿಗೆ ಗಾಜಿನ ಚೂರು ಚುಚ್ಚಿದರೂ ಎದೆಗುಂದದೆ ಅವರು ಮುಂದುವರಿಸಿದ ಕೆಲಸವನ್ನು ನೋಡಿದ್ರೆ ಎಂತವರಿಗಾದ್ರು ಹುರುಪು ಮೂಡುತ್ತಿತ್ತು.
ಗಾಜಿನ ಚೂರು ಚುಚ್ಚಿದ ನೋವಿಗಿಂತ ಕೆಲ್ಸ ಮಾಡಿದ ಖುಷಿನೇ ಅವರಲ್ಲಿ ಜಾಸ್ತಿ ಇತ್ತು
ಈ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ ಜಿಲ್ಲೆಯ ಎಲ್ಲಾ ಕಾರ್ಯಕರ್ತರಿಗೂ ಗ್ರಾಮಸ್ಥರು ದನ್ಯವಾದಗಳು ಹೇಳಿದರು ವರದಿ ಮಲ್ಲು ಬಗಲೂರ