ಶಹಾಪುರ ತಾಲೂಕ ಆರೋಗ್ಯ ಅಧಿಕಾರಿ ನಿರ್ಲಕ್ಷಕ್ಕೆ ಇನ್ನೇಷ್ಟು ಜನರ ಜೀವ ಬಲಿ..?
ಶಹಾಪುರ: ತಾಲೂಕಿನೆಲ್ಲೇಡೆ ವಿವಿಧ ಸಂಘಟನೆಗಳ ಮುಖಂಡರು ನಕಲಿ ವೈದ್ಯರ ಜಾಲ ಪತ್ತೆ ಹಚ್ಚಿ, ಅಧಿಕಾರಿಗಳ ಕೆಲಸ ಮತ್ತಷ್ಟು ಸುಲಭ ಮಾಡಿಕೊಟ್ಟರೆ ಇಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ನಕಲಿ ವೈದ್ಯರಿಂದಲೇ ಹಣ ಪಡೆದು ಪ್ರಕರಣಗಳನ್ನೆ ತಲೆಕೇಳಗಾಗುವಂತೆ ಮಾಡಿ ಪ್ರಕರಣವನ್ನೇ ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದ್ದು, ಇದಕ್ಕೆಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳೆ ನೇರ ಹೊಣೆ ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕ ಅಧ್ಯಕ್ಷ ಸಿದ್ದು ಪಟ್ಟೇದಾರ ಆರೋಪಿಸಿದ್ದಾರೆ.
ನಗರದಲ್ಲಿ ಮಹಾಂತೇಶ್ವರಿ ಕ್ಲಿನಿಕ್‌ನ್ನು ಅನಿಧಿಕೃತವಾಗಿ ಶಾಂತಕುಮಾರ ಪಟ್ಟಣಶೇಟ್ಟಿ ನಡೆಸುತ್ತಿದ್ದು, ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೆ ಬೇರೆ ಯಾರದೊ ಹೆಸರಿನಲ್ಲಿ ಕ್ಲಿನಿಕ್ ನಡೆಸುವುದಲ್ಲದೇ ತಾನೆ ಸ್ವತಃ ಮಾತ್ರೆ, ಇಂಜೆಕ್ಷನ್ ಮಾಡಿ ಕಳುಹಿಸುತ್ತಿದ್ದು, ಈ ಬಗ್ಗೆ ಸಾಲು ಸಾಲು ವರದಿ ಮಾಡಿ ಸತ್ಯಾಂಶ ಮುಂದಿಟ್ಟರು ಸಹ ಟಿಎಚ್‌ಓ ಕ್ರಮಕ್ಕೆ ಮುಂದಾಗುತ್ತಿಲ್ಲ, ಡಿಎಚ್‌ಓಗೆ ಪತ್ರ ಬರೆದಿದ್ದೇವೆ ಎಂದು ಹೇಳಿ ಜಾರಿಕೊಳ್ಳಲಿದ್ದು, ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಡಿಎಚ್‌ಓನ ಕೈಗೊಂಬೆಯಾಗಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ. ಅಧಿಕಾರಿಗಳ ನಿಷ್ಕಾಳಜಿಗೆ ಏನು ಕಾರಣ, ಇದೀಗ ತಾಲೂಕು ಆರೋಗ್ಯಾಧಿಕಾರಿಯ ಸುತ್ತ ಅನುಮಾನದ ಹುತ್ತ ಹಬ್ಬಿದ್ದು ಇದಕ್ಕೆ ಅವರೇ ಉತ್ತರಿಸಬೇಕು.
ನಕಲಿ ವೈದ್ಯರ ಹಾವಳಿಗೆ ಸರ್ಕಾರ ಬಿಗಿಯಾದ ಕ್ರಮ ತೆಗೆದುಕೊಳ್ಳಲು ಆದೇಶ ಹೊರಡಿಸಿದರು ಇದ್ಯಾವುದು ಇಲ್ಲಿನ ಅಧಿಕಾರಿಗಳಿಗೆ ಅನ್ವಯವಾಗುತ್ತಿಲ್ಲಾ. ತಮ್ಮದೇ ಆದ ಕಾರುಬಾರಿನಲ್ಲಿ ಇರುವ ಇಲ್ಲಿನ ಭ್ರಷ್ಟ ಅಧಿಕಾರಿಗಳ ಕೃಪೆಗೆ ಮತ್ತಷ್ಟು ನಕಲಿ ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ.
ಕೇವಲ ನೋಟಿಸ್ ನೀಡುವುದು, ನಂತರ ಒಂದು ವಾರದ ನಂತರ ಸೀಜ್ ಮಾಡುತ್ತಾರೆ. ಆದಾದ ಎರಡು ದಿನಗಳು ಕಳೆದರೆ ಮತ್ತೆ ಆಸ್ಪತ್ರೆಗಳು ಓಪನ್ ಆಗುತ್ತವೆ. ಇದು ಹೇಗೆ ಎಂಬುವುದು ಜನರಿಗೆ ಪ್ರಶ್ನೇ ಕಾಡುತ್ತಿದೆ. ನಕಲಿ ವೈದ್ಯ ಎಂದು ದಾಖಲೆ ಸಮೇತ ಮುಂದಿಟ್ಟು ತಾಲೂಕ ಆರೋಗ್ಯಾಧೀಕಾರಿಗಳು ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡು ಸಂಗತಿ. ಅಮಾಯಕತೆಯನ್ನು ಕೆಲವರು ದುರಪಯೋಗಪಡಿಸಿಕೊಂಡು ನಕಲಿ ಚಿಕಿತ್ಸೆ ನೀಡುತ್ತಾರೆ. ಇದು ಕಾನೂನು ಬಾಹಿರವಾದರು ಅಧಿಕಾರಿಗಳ ಕುಮ್ಮಕ್ಕಿನಿಂದ ಇಷ್ಠಲ್ಲಾ ನಡಿಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.